ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಭಯಾನಕ ರೂಪ ಪಡೆದಿದೆ. ಶನಿವಾರದಿಂದ ಆರಂಭವಾದ ಈ ಸಂಘರ್ಷದಲ್ಲಿ ಅಮೆರಿಕದ ಮಿಲಿಟರಿ(US Military Loss) ಶಕ್ತಿಯ ಮೇಲೆ ಇರಾನ್ ಅನಿರೀಕ್ಷಿತ ಮತ್ತು ಭೀಕರ ಪ್ರಹಾರ ನಡೆಸಿದೆ. ಅನಾಡೋಲು ವರದಿಯ ಪ್ರಕಾರ, ಕೇವಲ ನಾಲ್ಕು ದಿನಗಳ ಕಾರ್ಯಾಚರಣೆಯಲ್ಲಿ ಅಮೆರಿಕ ಬರೋಬ್ಬರಿ 1.902 ಬಿಲಿಯನ್ ಡಾಲರ್ (ಸುಮಾರು 15,800 ಕೋಟಿ ರೂಪಾಯಿ) ಮೌಲ್ಯದ ಮಿಲಿಟರಿ ಆಸ್ತಿಯನ್ನು ಕಳೆದುಕೊಂಡಿದೆ.